PM Ujjwala Yojana: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಿಯಾಯಿತಿ ದರದಲ್ಲಿ ಎಲ್ಪಿಜಿ ಸಿಲಿಂಡರ್

By
On:

ಕನ್ನಡದ ಕುಲ ಕೋಟಿ ಜನರಿಗೆ ನಮಸ್ಕಾರ, ಇಂದಿನ ಈ ಲೇಖನದಲ್ಲಿ ಉಜ್ವಲ ಯೋಜನೆಯ (PM Ujjwala Yojana) ಫಲಾನುಭವಿಗಳಿಗೆ ಉಚಿತ ಗ್ಯಾಸ್‌ ಸ್ಟೋ ಹಾಗೂ ಕಡಿಮೆ ದರದಲ್ಲಿ ಎಲ್ಪಿಜಿ ಸಿಲಿಂಡರ್ ಗಳನ್ನು ನೀಡುತ್ತಾರೆ. ಈ ಯೋಜನೆಯ ಫಲಾನುಭವಿಗಳು ಸಾಮಾನ್ಯ ಗ್ರಾಹಕರಿಗಿಂತ ಅಗ್ಗದ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆಯಲಿದ್ದಾರೆ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿ. ಸಬ್ಸಿಡಿಯನ್ನು ನೀಡುತ್ತದೆ. ಇದರ ಅಡಿಯಲ್ಲಿ, ಫಲಾನುಭವಿಗಳು ಸಾಮಾನ್ಯ ಗ್ರಾಹಕರಿಗಿಂತ 300 ರೂ.ಗಳಷ್ಟು ಕಡಿಮೆ ಬೆಲೆಗೆ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆದುಕೊಳ್ಳುತ್ತಾರೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ 31-05-2025 ರ ವರೆಗೆ LPG ಸಿಲಿಂಡರ್ಗಳಿಗೆ 300 ರೂ.ಗಳ ಸಬ್ಸಿಡಿ ದೊರೆಯಲಿದೆ. ಮುಂದಿನ ಎಂಟು ತಿಂಗಳುಗಳ ಕಾಲ, ಗ್ರಾಹಕರು 300 ರೂ. ರಿಯಾಯಿತಿ ಲಾಭವನ್ನು ಪಡೆದುಕೊಲಕ್ಳಬಹುದು. ಈ ಯೋಜನೆಯ ಫಲಾನುಭವಿಗಳಿಗೆ ವರ್ಷದಲ್ಲಿ 14.2 ಕೆಜಿ ತೂಕವಿರುವ 12 ರೀಫಿಲ್ ಗಳನ್ನು ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು. 9 ಕೋಟಿಗೂ ಹೆಚ್ಚು ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಹಾಗೂ 75 ಲಕ್ಷ ಹೊಸ ಸಂಪರ್ಕಗಳನ್ನು ನೀಡುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ರೀತಿಯಾಗಿ, 10 ಕೋಟಿಗೂ ಹೆಚ್ಚು ಫಲಾನುಭವಿಗಳು ಇರುತ್ತಾರೆ. ಈ ಯೋಜನೆಯು ಬಡ ಕುಟುಂಬಗಳು ತಮ್ಮ ಮೊದಲ ಹೆಜ್ಜೆ ಇಡಲು ಸಹಾಯ ಮಾಡುವ ಮತ್ತು ಆರೋಗ್ಯಕರ ಅಡುಗೆಯ ಕಡೆಗೆ ನಡವಳಿಕೆಯ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ.

2016 ರಲ್ಲಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ LPG ಸಿಲಿಂಡರ್‌ ಸಂಪರ್ಕ ಒದಗಿಸುವ ಗುರಿ ಹೊಂದಾಲಾಗಿತ್ತು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದೆ. ಈ ಯೋಯನೆಯಡಿ 8 ಕೋಟಿಗೂ ಹೆಚ್ಚು ಜನರು ಲಾಭ ಪಡೆದುಕೊಂಡಿದ್ದಾರೆ

ಉಜ್ವಲ ಯೋಜನೆಗೆ ಅರ್ಹತೆಗಳು;

ಮಹಿಳೆಯರು ಅರ್ಜಿ ಸಲ್ಲಿಲು ಅರ್ಹರು
ಮಹಿಳೆಯ ವಯಸ್ಸು 18 ಕ್ಕಿಂತ ಮೇಲ್ಪಟಿರಬೇಕು
ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು.
ಬಿಪಿಎಲ್ ಕಾರ್ಡ್ ಹೊಂದಿರಬೇಕು
ಅರ್ಜಿದಾರರ ಕುಟುಂಬದ ಯಾವ ಸದಸ್ಯರ ಹೆಸರಿನಲ್ಲಿಯೂ LPG ಕನೆಕ್ಷನ್ ಇರಬಾರದು.

PM Ujjwala Yojana ದಾಖಲೆಗಳು;

ಆಧಾರ್‌ ಕಾರ್ಡ್‌
ಪಡಿತರ ಚೀಟಿ,
ವಿಳಾಸದ ಪುರಾವೆ
ಬ್ಯಾಂಕ್‌ ಪಾಸ್ ಬುಕ್‌

PM Ujjwala Yojana Application Link:

ಉಚಿತ ಸಿಲಿಂಡರ್‌ ಅರ್ಜಿ: www.pmuy.gov.in

For Feedback - feedback@example.com
Join Our WhatsApp Channel

Related News

Leave a Comment