Anna Bhagya Amount:ಅನ್ನಭಾಗ್ಯ ಯೋಜನೆಯ DBT Status ಅನ್ನು ಹೀಗೆ ಚೆಕ್‌ ಮಾಡಿ

By
On:

ಕನ್ನಡದ ಕುಲ ಕೋಟಿ ಜನರಿಗೆ ನಮಸ್ಕಾರ, ಇಂದಿನ ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ DBT Status ಅನ್ನು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ (Anna Bhagya Amount) ಮಾಡಿಕೊಳ್ಳಬಹುದು ಎಂಬ ವಿಧಾನವನ್ನು ತಿಳಿಸುತ್ತೆವೆ. ಈ ಕೇಳಗೆ ನೀಡಿರುವ ಹಂತಗಳ ಮೂಲಕ ಚೆಕ್ ಮಾಡಿಕೊಳ್ಳಿ.

ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರವು ನೀಡುವ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿಯನ್ನು ನೀಡುತ್ತದೆ. ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಆಹಾರ ಇಲಾಖೆಯು ಉಚಿತವಾಗಿ ಅಕ್ಕಿಯನ್ನು ನೀಡುತ್ತದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಹೆಚ್ಚುವರಿ ಅಕ್ಕಿ ಸಿಗದ ಕಾರಣ, 5 ಕೆಜಿ ಅಕ್ಕಿ ನೀಡಿ, ಇನ್ನೂಳಿದ ಅಕ್ಕಿ ಬದಲಿಗೆ ಪ್ರತಿಯೊಬ್ಬರಿಗೆ 170 ರೂ. ನೀಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯೆ ಎಂಬುದನ್ನು DBT Status ಅನ್ನು ಈ ಕೆಳಗೆ ತಿಳಿಸಿರುವ ವಿಧಾನಗಳ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

How To Check Anna Bhagya Amount DBT Status

How To Check Anna Bhagya Amount DBT Status Online

ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಜಮಾ ಆಗಿಲ್ಲವೆ ಎಂಬುದನ್ನು ಈ ಕೆಳಗಿನ ಹಂತಗಳ ಮೂಲಕ ನೋಡಿಕೊಳ್ಳಬಹುದು.

ಹಂತ-1: ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ (ahara.kar.nic.in/lpg) ಗೆ ಬೇಟಿ ನೀಡಬೇಕು.

ಹಂತ-2: ನೆಕ್ಸ್ಟ್ ಪೇಜ್ ನಲ್ಲಿ 3 ಆಯ್ಕೆಗಳು ಬರುತ್ತವೆ. ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಹಂತ-3: ನಂತರದ ಪಟದಲ್ಲಿ ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ ಪೇಜ್ ಓಪನ್ ಆಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

ಹಂತ-4: ಸ್ಟೇಟ್ಸ್ ಆಫ್ ಡಿಬಿಟಿ (Status of DBT) ಎಂಬ ಆಯ್ಕೆ ಬರುತ್ತದೆ. ಅದರಲ್ಲಿ Select Year, Select Month ಅಂತ ಇರುತ್ತದೆ. ನಿವು ಯಾವ ತಿಂಗಳಿನ DBT Status ಚೆಕ್ ಮಾಡಬೇಕು ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ. ತದನಂತರ Enter RC Number/RC No. ಎಂದು ತೊರಿಸುತ್ತದೆ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಬಟನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ-5: ಕೊನೆಯದಾಗಿ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಕಾಣಿಸುತ್ತದೆ, ಅವರ ಆಧಾರ ನಂಬರ್ ನ ಕೊನೆಯ 4 ಸಂಖ್ಯೆ ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಹಣದ ವಿವರ ಅಲ್ಲಿ ಇರುತ್ತದೆ. ನೀವು Ahara Kar Nic DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಬರಲಿದೆ ನೋಡಬಹುದು‌.

ಹಂತ-6: ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಫ್ಯಾಮಿಲಿ ಹೆಡ್ ಆಧಾರ ಕಾರ್ಡ್ ಲಿಂಕ್ ಇರುವ ಅವರ ಬ್ಯಾಂಕ್ ಖಾತೆಗೆ ಸರ್ಕಾರವು ಹಣ ವರ್ಗಾವಣೆ ಮಾಡಿರುವ ಮಾಹಿತಿಯು ಈ ಕೇಳಗಿನಂತೆ ನೋಡಬಹುದು.

ಅನ್ನಭಾಗ್ಯ DBT Status ಚೆಕ್‌ ಮಾಡುವ ಲಿಂಕ್: ಇಲ್ಲಿ ಚೆಕ್‌ ಮಾಡಿ

For Feedback - feedback@example.com
Join Our WhatsApp Channel

Related News

Leave a Comment